ಕೇಶನಾಶಕ    
 
ಚರ್ಮದ ಅಂದವನ್ನು ಕೆಡಿಸದೆ ಕೂದಲನ್ನು ತೆಗೆಯಬಲ್ಲ ರಾಸಾಯನಿಕ ವಸ್ತು (ಡಿಪಿಲಟೋರೀ), ಅಂಗರಾಗ ವಸ್ತುವಾಗಿ ಮನುಷ್ಯೋಪಯೋಗದಲ್ಲಿದೆ. ಪ್ರಾಣಿಗಳ ಚಕ್ಕಳದಿಂದ ಕೂದಲನ್ನು ತೆಗೆಯಲು ಭಿನ್ನಕೇಶನಾಶಕಗಳ ಬಳಕೆ ಉಂಟು. ಸಾಮಾನ್ಯವಾಗಿ ಸುಟ್ಟ ಸುಣ್ಣ ಮತ್ತು ಆರ್ಸೆನಿಕ್ ಸಲ್ಫೈಡ್‍ಗಳ (ಂs2 S3)  ಮಿಶ್ರಣವನ್ನು ಒಂದು ಸಾರ ಪ್ರತ್ಯಾಮ್ಲ ದ್ರಾವಣದಲ್ಲಿ ಬೆರೆಸಿ ಕೇಶನಾಶಕವಾಗಿ ಉಪಯೋಗಿಸುತ್ತಾರೆ. ಅಂಗರಾಗ ಸಾಧನವಾಗಿ ಇದನ್ನು ಬಳಸುವಾಗ ಕೂದಲು ತೆಗೆಯಬೇಕಾದ ಭಾಗಗಳನ್ನು ಮೊದಲು ಈ ಮಿಶ್ರಣದಿಂದ ಉಜ್ಜಬೇಕು. ಸ್ವಲ್ಪಹೊತ್ತಿನ ಮೇಲೆ ಬೆಚ್ಚಗಿನ ನೀರಿನಲ್ಲಿ ಅವನ್ನು ತೊಳೆಯಬೇಕು. ಕೇಶನಾಶಕ ಬಹಳ ತೀಕ್ಷ್ಣ ರಾಸಾಯನಿಕ. ಅದನ್ನು ಚರ್ಮದಮೇಲೆ ಉಜ್ಜಿದಾಗ ಚರ್ಮ ಕೆರಳಿ ಅಪಾಯಉಂಟಾಗದ ಹಾಗೆ ಎಚ್ಚರಿಕೆವಹಿಸಬೇಕು. ಕೆಲವು ಬಾರಿ ಟಾರೆಣ್ಣೆಯಿಂದ ಬರುವ ಕಪ್ಪುರಾಳದ ಲೇಪ ಮತ್ತು ಕರ್ಪೂರ ರಾಳಗಳನ್ನು ಕೇಶನಾಶಕವಾಗಿ ಉಪಯೋಗಿಸಬಹುದು. ಚÀರ್ಮ ಹದಮಾಡುವ ಕೈಗಾರಿಕೆಗಳಲ್ಲಿ  ಕುರಿ ಚರ್ಮದಿಂದ ತುಪ್ಪಟ ಅಥವಾ ಕೇಶಗಳನ್ನು ತೆಗೆಯಲು ಸುಟ್ಟಸುಣ್ಣದ ಗಂಜಿ ಮತ್ತು ಸೋಡಿಯಂ ಸಲ್ಫೈಡ್ ಅಥವಾ ಕ್ಯಾಲ್ಸಿಯಂ  ಹೈಡ್ರೋಸಲ್ಫೈಡುಗಳ ಮಿಶ್ರಣವನ್ನು ಉಪಯೋಗಿಸುತ್ತಾರೆ.

(ಡಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ